ಮೊನ್ನೆ IT ನಗರಿಯ ಟ್ರಾಫಿಕ್ ಜಾಮ್ನಲ್ಲಿ ಈ ಆಟೋ ನನ್ನ ಕಣ್ಣು ಸೆಳೆಯಿತು ಯಾಕೋ ಆ ಎರಡು ಸಾಲುಗಳು ನನ್ನ ಮನಸ್ಸಿನ ಬಾಗಿಲು ತಟ್ಟಿದ್ದವು ಇಣುಕಿ ನೋಡಲು ಪರಿಚಿತವೆನಿಸಿದ್ದವು ಹತ್ತಿರದ ಸಂಬಂಧಿಯಂತೆ
"ಕಾವೇರಿ ನೀರು ಕುಡಿಯುವ ಮೊದಲು ಕನ್ನಡ ಕಲಿ
ಕರ್ನಾಟಕದ ಅನ್ನ ತಿನ್ನುವ ಮೊದಲು ಕನ್ನಡಿಗರ ಸಂಸ್ಕೃತಿ ಕಲಿ"
ಪ್ರತಿಯೊಬ್ಬ ಕನ್ನಡಿಗನಂತೆ ಆ ಕ್ಷಣ ನನಗೆ ಹೆಮ್ಮೆ ಅನ್ನಿಸಿತು ಆದರೆ ಆ ಎರಡು ಸಾಲಲ್ಲಿ aggression ಇತ್ತು ಬಲವಂತವಿತ್ತು ಆದರೆ ಇದು ಎಷ್ಟು ಸರಿ? ಜಾಗತೀಕರಣದ ಈ ಯುಗದಲ್ಲಿ ನಮ್ಮ ಸುತ್ತ ನಾವೇ ಹೀಗೆ ಬೇಲಿ ಹಾಕಿ ಕೊಳ್ಳುವುದು ಎಷ್ಟು ಸೂಕ್ತ? ಬಲವಂತದ ಮದುವೇ ಎಷ್ಟು ದಿನ? ಅತಿಥಿ ದೇವೋಭವ ಅನ್ನೋ ನಾಡಲ್ಲಿ ಹೀಗೆ ನಾವು ನಮ್ಮ ಮನೆಯ ಸುತ್ತ ಮುಳ್ಳು ಬೇಲಿ ಹಾಕಿಕೊಂಡರೆ ಅದು ನಮ್ಮ ದೌರ್ಬಲ್ಯವೆನಿಸುವದಿಲ್ಲವೇ? ನಮ್ಮ ಅಸಹಾಯಕತೆ ಅನ್ನಿಸುವುದಿಲ್ಲವೇ?
ಪ್ರತಿಯೊಬ್ಬರಿಗೂ ನಮ್ಮ ಊರು ನಮ್ಮ ನಾಡು ಅನ್ನೋ ಪ್ರೀತಿ ಸರ್ವೆ ಸಾಮಾನ್ಯ ಹಾಗೇ ಇಂತಾ ಪ್ರೀತಿ ತರುವ ಸ್ವಾರ್ಥನು ಸಮರ್ಥನೀಯ ಹಾಗಂತ ನಾವು ಬಲವಂತವಾಗಿ ಏನನ್ನು ಸಾಧಿಸಲು ಸಾದ್ಯವಿಲ್ಲ ಅಲ್ಲವೇ? ಬಲವಂತವಾಗಿ ಸೀತೆಯ ಹೊತ್ತು ಕೊಂಡು ಹೋದ ರಾವಣನಿಗೆ ಸಿಕ್ಕಿದ್ದಾದರೂ ಏನು?
ಮಕ್ಕಳು ದೇವರಂತೆ ಅಂತಹ ಯಾವುದೇ ಮಗುವನ್ನು ನೋಡಿದರೆ ಸಾಕು ನಮ್ಮ ಮುಖದಲ್ಲಿ 100 watt ನಗೆಯೊಂದು ಮುಡಿರುತ್ತೆ ಭಾಷೆ, ಬಣ್ಣ, ಮತ ಯಾವುದರ ಹಂಗಿಲ್ಲದಂತೆ ಭಾಷೆಗಳು ಹಾಗೇನೆ ಅವು ಮಕ್ಕಳಂತೆ ಬಣ್ಣ ಬಣ್ಣದ ಹೂಗಳಂತೆ ಬಣ್ಣ ಪರಿಮಳ ಬೇರೆ ಬೇರೆಯಾದರು ಆವುಗಳು ಒಂದೇ ನಮ್ಮ ಭಾಷೆಯ ಮೇಲೆ ಪ್ರೀತಿ ಇರುವಂತೆ ಬೇರೆ ಭಾಷೆಯ ಮೇಲೆ ದ್ವೇಷವಿರಕೂಡದು. ನಮ್ಮ ಭಾಷೆನ ಬಲವಂತವಾಗಿ ಬೇರೆಯವರಿಗೆ ಕಲಿಸುವದರಿಂದ ಏನು ಲಾಭವಿಲ್ಲ ಬದಲಾಗಿ ಭಾಷೆಯ ಕಟ್ಟುವ ಕೆಲಸವಾಗಬೇಕು ನಮ್ಮ ಭಾಷೆಯನ್ನ ನಾವು ಮುದ್ದಾಡಬೇಕು ಅದು ಬಿಟ್ಟು ನಮ್ಮ ಮಗುವನ್ನ ಪಕ್ಕದಮನೆಯವರು ಮುದ್ದಾಡಲಿ ಅಂತ ಬಯಸೋದು ನಮ್ಮ ಮುರ್ಖತನವಾಗುತ್ತೆ ಅಲ್ಲವೇ? ಹಾಗೇ ಭಾಷೆ ಮತ್ತು ಸಂಸ್ಕೃತಿ ಅನುಕರಣೀಯ ನಾವು ಬೇರೆಯವರನ್ನು ನೋಡಿ ಕಲಿಯುವಂತೆ ನಮ್ಮನ್ನು ನೋಡಿ ಬೇರೆಯವರು ಕಲಿಯುತ್ತಾರೆ ಒಂದು ಸಂಸ್ಕೃತಿ ಹುಟ್ಟೋದೇ ಹಾಗೇ ಅದಕ್ಕೆ ನಾವು ನಮ್ಮ ಸಂಸ್ಕೃತಿಯನ್ನ ಸರಿಯಾಗಿ ಉಳಿಸಿಕೊಂಡು ಹೋಗ್ತಾ ಇದ್ದಿವಾ? ನಮ್ಮ ಸಂಸ್ಕೃತಿ, ನಮ್ಮ ಭಾಷೆ ಎಷ್ಟು ಮನೆ ಮನಗಳಲ್ಲಿ ಇದೆ ಅನ್ನುವುದರ ಅರಿವಾಗಬೇಕು ಹಾಗಾದಾಗ ಮಾತ್ರ ನಮ್ಮ ಸಂಸ್ಕೃತಿಯನ್ನು ನೋಡಿ ಅವರು ಅನುಕರಿಸುತ್ತಾರೆ ಭಾಷೆಯ ಸೊಗಡನ್ನು ಅರಿತುಕೊಳ್ಳುತ್ತಾರೆ ಹಾಗಾದಾಗ ಮಾತ್ರ ಭಾವೆನೆಗಳು ಭಾಷೆಯಾಗಿ ಹೊರ ಹೊಮ್ಮುತ್ತವೆ.
ಈಗ ಮತ್ತೆ ಅವೇ ಎರಡು ಸಾಲುಗಳನ್ನು ಹೀಗೆಂದರೆ ಹೇಗೆ
"ಕಾವೇರಿ ನೀರು ಕುಡಿಯಲು ಕನ್ನಡ ಕಲಿತಂತೆ
ಕರ್ನಾಟಕದ ಅನ್ನ ತಿನ್ನಲು ಕನ್ನಡಿಗರ ಸಂಸ್ಕೃತಿ ಕಲಿತಂತೆ"
ಈಗ ನೋಡಿ ನಮ್ಮ ಭಾವ ಎಷ್ಟೊಂದು ವಿಶಾಲವಾಗಿದೆ ನಮ್ಮ ಬಗ್ಗೆ ನಮಗೆ positive attitude ಮುಡಿದಂತಿದೆ ಅಲ್ಲವೇ? ಕಾವೇರಿ ನೀರು ಕುಡಿದವರೆಲ್ಲರು ಕನ್ನಡಿಗರು ನಮ್ಮ ನೆಲದ ಅನ್ನ ಉಂಡವರು ನಮ್ಮ ಸಂಸ್ಕೃತಿಯನ್ನು ಬಲ್ಲವರು
ನಮ್ಮ ಬಗ್ಗೆ ನಮಗೆ ವಿಶ್ವಾಸವಿದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಹಾಗೇ ಒಳ್ಳೆಯದನ್ನ ಬಯಸಿದಾಗ ಮಾತ್ರ ಒಳ್ಳೆಯದಾಗುವುದು ಅದಕ್ಕೆ ಅಲ್ಲವೇ "Wish Well, Be Well" ಅಂತ ಹೇಳೋದು.
3 comments:
Really impressible and you are a too good writer .............keep it up my dear Brother
Hi Vjay,
Very nice and impressive. Really you are a good writer..
Would suggest you to change your profession :-)
Brother alla tamma chennagi barediddiya.....tumba valle vichara kannada paravagi horaduva janaru swalpa ninna tara yochne madiddre istu hottige kannada elli irabekagittu alle iruttittu...
Post a Comment