ನನ್ನೊಳಗೆ ನಾನೊಂದು ಪ್ರಶ್ನೆಯಾಗಿರುವೆ
ಉತ್ತರವ ಹುಡುಕುವರಾರು?
ಒಳಗೊಳಗೆ ಸುಟ್ಟು ಬೂದಿಯಾಗಿರುವೆ
ಎದೆಯ ಕಿಚ್ಚು ಆರಿಸುವರಾರು?
ದಿಕ್ಕಿಲ್ಲದ ದಾರಿಯಲ್ಲಿ
ನಡೆ ನಡೆದು ಸೋತಿರುವೆ
ನೀರಿಲ್ಲದ ಊರಿನಲ್ಲಿ
ನಾ ಬಿಕ್ಕುತಿರುವೆ
ಹೇಳದಿರುವ ನೂರೆಂಟು ಮಾತುಗಳಿವೆ
ಕಿವಿಗೊಟ್ಟು ಕೇಳುವರಾರು?
ನನಸಾಗದೆ ಸತ್ತ ಕನಸುಗಳಿಗೆ
ಬೆಂಕಿ ಇಡುವರಾರು?
ಊರ ಜಾತ್ರೆಯಲ್ಲು
ನಾ ಒಂಟಿಯಾಗಿರುವೆ
ನನ್ನದಲ್ಲದ ಊರಿನಲ್ಲಿ
ನನ್ನವರ ಹುಡುಕುತಿರುವೆ
ನೋವುಗಳ ಭಾರ ತಾಳದೆ ಕುಸಿದಿರುವೆ
ಎತ್ತಿ ಹಿಡಿಯುವರಾರು?
ಪ್ರೀತಿಯ ಅರಸಿ ಸೋತು ಶರಣಾಗಿರುವೆ
ಅಪ್ಪಿ ಮುತ್ತಿಕ್ಕುವರಾರು?
ಮುಖವಾಡದ ಬದುಕು
ಭಾವನೆಗಳಿಗೆಲ್ಲಿ ಬೆಲೆ
ದೇವರಿಲ್ಲದ ಗುಡಿಯಲ್ಲಿ
ನಾ ಹರಕೆ ಹೊತ್ತಿರುವೆ
ನನ್ನೊಳಗೆ ನಾನೊಂದು ಪ್ರಶ್ನೆಯಾಗಿರುವೆ
ಉತ್ತರವ ಹುಡುಕುವರಾರು?
ಒಳಗೊಳಗೆ ಸುಟ್ಟು ಬೂದಿಯಾಗಿರುವೆ
ಎದೆಯ ಕಿಚ್ಚು ಆರಿಸುವರಾರು?
2 comments:
ಅವರು ಯಾರೆಂದು ಹುಡುಕಲು ಮತ್ತೊಬ್ಬರಿಗೆ ಸಾದ್ಯವಿಲ್ಲ ವಿಜಯ, ಅದನ್ನು ತಾವೇ ಹುಡುಕಿ ಕೊಳ್ಳಬೇಕು.
ಮುಖವಾಡದ ಬದುಕು
ಭಾವನೆಗಳಿಗೆಲ್ಲಿ ಬೆಲೆ
ದೇವರಿಲ್ಲದ ಗುಡಿಯಲ್ಲಿ
ನಾ ಹರಕೆ ಹೊತ್ತಿರುವೆ
super...
ಮನುಷ್ಯ ಎಷ್ಟು ಮುಖವಾಡ ಹಾಕ್ತಾನೇ ಅಂದ್ರೆ .. ಕೊನೆಗೆ ಅ ಸೃಷ್ಟಿಕರ್ತನೇ ಮೋಸಹೋಗ್ತಾನೆ..
as basana said...ಅದನ್ನು ತಾವೇ ಹುಡುಕಿ ಕೊಳ್ಳಬೇಕು... NICE ONE
Post a Comment