Sunday, July 27, 2008

ಗಿಳಿಯೂ ಪಂಜರದೊಳಿಲ್ಲ

ಪಂಜರದಿಂದ ಮತ್ತೊಂದು ಗಿಳಿ ಹಾರಿಹೋಗಿತ್ತು, ಕಳೆದ ಎರಡು ವರ್ಷದಿಂದ ನನಗೆ ಗೊತ್ತಿರದಂತೆ ನನ್ನ ಮನಸ್ಸಿಗೆ ಹತ್ತಿರವಾದ friend, philosopher, guide, mentor, guru and well wisher ಹೀಗೆ ಪಂಜರದಿಂದ ಏಕಾಏಕಿ ಹಾರಿ ಹೋದ ಅನುಭವ ಕಾಡ್ತಾನೆ ಇದೆ.

ಜೀವನವನ್ನೋ ರೈಲು ಪ್ರಯಾಣದಲ್ಲಿ ಕಾರಣವಿಲ್ಲದೇ ಕೆಲವರು ಹತ್ತಿರವಾಗಿಬಿಡುತ್ತಾರೆ ಹಾಗೇ ಕಾರಣ ಹೇಳದೆ ಹೋಗಿಬಿಡುತ್ತಾರೆ. ಮೂರು ದಿನದ ಈ ಪ್ರಯಾಣದಲ್ಲಿ ನಮ್ಮ ನಿಲ್ದಾಣ ಬಂದಾಗ ಖುಷಿ ಖುಷಿ ಇಂದ ವಿದಾಯ ಹೇಳಿಬಿಡುತ್ತೇವೆ, ಆದರೆ ಕಳೆದು ಹೋದ ಆ ನೆನಪುಗಳು ಮಾತ್ರ ಮನಸನ್ನು ಹುರಿದು ತಿನ್ನುತ್ತವೆ.

"ಜಾಣೆ ತು ಯಾ ಜಾಣೆ ನಾ" ದಲ್ಲಿ ಜಯ್ ಅದಿತಿಗೆ ಹೇಳುವಂತೆ ಜೀವನದಲ್ಲಿ ಒಮ್ಮೊಮ್ಮೆ ಹೀಗೆ ಯಾರೋ ನಮ್ಮವರೆನಿಸಿ ಬಿಡುತ್ತಾರೆ ಹಾಗೇನೇ ಒಮ್ಮೊಮ್ಮೆ ಅವರು ನಮ್ಮನ್ನ ಅಗಲಿದಾಗ ಅದೊಂದು ಸುಂದರ ಕನಸು ಎನ್ನಿಸಿಬಿಡುತ್ತೆ, ಎಷ್ಟೊಂದು ನಿಜವಲ್ಲವೇ?

ಹಾಗೇ ನಿಲ್ದಾಣ ಒಂದರಲ್ಲಿ ನಾನು ಇವರನ್ನು ಬಿಟ್ಟು ಇಳಿದಾಗ I knew I will miss him ಅಂತ but ಅದು ಸೃಷ್ಟಿಯ ನಿಯಮ. ಹಳೇ ನೆನುಪುಗಳ ಬೆಚ್ಚನೆಯ ಚಾದರದಲ್ಲಿ ಮಲಗ ಬಯಸುವ ಮನಸನ್ನ ಬಡಿದೆಬ್ಬಿಸಿ ಮುಂದಿನ ಪ್ರಯಾಣಕ್ಕೆ ಅನಿಗೊಳಿಸುತ್ತಿದ್ದೇನೆ.

ಪಂಜರದಿಂದ ಗಿಳಿ ಹಾರಿ ಹೋಗಿದ್ದರು ಮತ್ತೆ ಬಂದೆ ಬರುತ್ತೆ ಅನ್ನೋ ವಿಶ್ವಾಸ ಅದಮ್ಯವಾಗಿದೆ. ಗಿಳಿಯೊಂದಿಗೆ ಮಾತನಾಡಿದ ಪ್ರತಿ ಮಾತು ಮನದ ಮುಗಿಲಿನಲ್ಲಿ ಮೆಘಗಳಾಗಿ ಮಳೆ ತಂದಿವೆ. ಮಳೆಗಾಲದ ಚಳಿಯಲ್ಲಿ ನೆನಪುಗಳು ಬೆಚ್ಚಗಿನ ಹೊದಿಕೆಯಾಗಿವೆ. ನೆನಪುಗಳ ಮಾತು ಮಧುರವಾಗಿದೆ.

ಪ್ರಪಂಚ ಚಿಕ್ಕದಾಗಿದೆ ಮತ್ತೆ ನಾವು ಸಿಗುತ್ತೇವೆ ಅನ್ನೋ ವಿಶ್ವಾಸವಿದೆ. ನಮ್ಮ ಸ್ನೇಹ ಹೀಗೆ ಚಿರಕಾಲವಿರುತ್ತೆ ಅನ್ನೋ ನಂಬಿಕೆಯಂತು ಯಾವತ್ತು ಇದೆ.

1 comment:

Renuka Abbigeri said...

ಹೌದು,ನಿಜವಾಗಿಯೂ ನಾವು ಎಸ್ಟೊಂದು ಜನರನ್ನು ಮಿಸ್ ಮಾಡ್ಕೊತಿವಿ ಅಲ್ವಾ!!!!!!!!!!!!!