Tuesday, October 28, 2008

ಕನ್ನಡಕ್ಕಾಗಿ

ಕನ್ನಡಿಗರಿಗೆ ಈ ವರ್ಷ ಹಬ್ಬಗಳ ಸಂಭ್ರಮವೋ ಸಂಭ್ರಮ. ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಒಟ್ಟೊಟ್ಟಿಗೆ ಬಂದಿವೆ. ಕನ್ನಡದ ಹಬ್ಬಕ್ಕೆ ನನ್ನದೊಂದು ವಿನಂತಿ ದಯವಿಟ್ಟು ನೀವು ಶಾಪಿಂಗ್ ಮಾಲ್'ಗಳಿಗೆ ಹೋದಾಗ ಮಾಲ್ ಅಲ್ಲಿರೋ staff ಜೊತೆಗೆ ಕನ್ನಡದಲ್ಲಿ ಮಾತನಾಡಿ. ಸೇಲ್ಸ್ ಬಾಯ್ ಅಥವಾ ಗರ್ಲ್ಸ್ ಹತ್ತಿರ ಕನ್ನಡದಲ್ಲೇ ವ್ಯವಹರಿಸಿ. ಅಕಸ್ಮಾತ ಅವರಿಗೆ ಕನ್ನಡ ಬರುವದಿಲ್ಲ ಅಂತಾದರೆ ಮಾಲ್'ನ ಮೇಲಾಧಿಕಾರಿ ಹತ್ತಿರ ಹೋಗಿ ಕನ್ನಡ ಮಾತನಾಡುವ ಸೇಲ್ಸ್ ಬಾಯ್'ನ ಡಿಮ್ಯಾಂಡು ಮಾಡಿ, ಕೇಳಿ ಪಡೆಯುವುದು ಗ್ರಾಹಕರ ಹಕ್ಕು. ಹಾಗಾದಾಗ ಕನ್ನಡದ ಹೆಚ್ಚೆಚ್ಚು ಹುಡುಗ ಹುಡುಗಿಯರಿಗೆ ಕೆಲಸ ಸಿಕ್ಕಂತಾಗುತ್ತೆ, ಕೆಲಸ ಪಡೆಯುವ ಮುನ್ನ ಕನ್ನಡ ಕಲಿಯುತ್ತಾರೆ ಹಾಗಾದರೆ the next time when you go for shopping ಕನ್ನಡದಲ್ಲಿ ಮಾತಾಡುತ್ತಿರಲ್ಲವೇ.