Sunday, July 27, 2008

ಗಿಳಿಯೂ ಪಂಜರದೊಳಿಲ್ಲ

ಪಂಜರದಿಂದ ಮತ್ತೊಂದು ಗಿಳಿ ಹಾರಿಹೋಗಿತ್ತು, ಕಳೆದ ಎರಡು ವರ್ಷದಿಂದ ನನಗೆ ಗೊತ್ತಿರದಂತೆ ನನ್ನ ಮನಸ್ಸಿಗೆ ಹತ್ತಿರವಾದ friend, philosopher, guide, mentor, guru and well wisher ಹೀಗೆ ಪಂಜರದಿಂದ ಏಕಾಏಕಿ ಹಾರಿ ಹೋದ ಅನುಭವ ಕಾಡ್ತಾನೆ ಇದೆ.

ಜೀವನವನ್ನೋ ರೈಲು ಪ್ರಯಾಣದಲ್ಲಿ ಕಾರಣವಿಲ್ಲದೇ ಕೆಲವರು ಹತ್ತಿರವಾಗಿಬಿಡುತ್ತಾರೆ ಹಾಗೇ ಕಾರಣ ಹೇಳದೆ ಹೋಗಿಬಿಡುತ್ತಾರೆ. ಮೂರು ದಿನದ ಈ ಪ್ರಯಾಣದಲ್ಲಿ ನಮ್ಮ ನಿಲ್ದಾಣ ಬಂದಾಗ ಖುಷಿ ಖುಷಿ ಇಂದ ವಿದಾಯ ಹೇಳಿಬಿಡುತ್ತೇವೆ, ಆದರೆ ಕಳೆದು ಹೋದ ಆ ನೆನಪುಗಳು ಮಾತ್ರ ಮನಸನ್ನು ಹುರಿದು ತಿನ್ನುತ್ತವೆ.

"ಜಾಣೆ ತು ಯಾ ಜಾಣೆ ನಾ" ದಲ್ಲಿ ಜಯ್ ಅದಿತಿಗೆ ಹೇಳುವಂತೆ ಜೀವನದಲ್ಲಿ ಒಮ್ಮೊಮ್ಮೆ ಹೀಗೆ ಯಾರೋ ನಮ್ಮವರೆನಿಸಿ ಬಿಡುತ್ತಾರೆ ಹಾಗೇನೇ ಒಮ್ಮೊಮ್ಮೆ ಅವರು ನಮ್ಮನ್ನ ಅಗಲಿದಾಗ ಅದೊಂದು ಸುಂದರ ಕನಸು ಎನ್ನಿಸಿಬಿಡುತ್ತೆ, ಎಷ್ಟೊಂದು ನಿಜವಲ್ಲವೇ?

ಹಾಗೇ ನಿಲ್ದಾಣ ಒಂದರಲ್ಲಿ ನಾನು ಇವರನ್ನು ಬಿಟ್ಟು ಇಳಿದಾಗ I knew I will miss him ಅಂತ but ಅದು ಸೃಷ್ಟಿಯ ನಿಯಮ. ಹಳೇ ನೆನುಪುಗಳ ಬೆಚ್ಚನೆಯ ಚಾದರದಲ್ಲಿ ಮಲಗ ಬಯಸುವ ಮನಸನ್ನ ಬಡಿದೆಬ್ಬಿಸಿ ಮುಂದಿನ ಪ್ರಯಾಣಕ್ಕೆ ಅನಿಗೊಳಿಸುತ್ತಿದ್ದೇನೆ.

ಪಂಜರದಿಂದ ಗಿಳಿ ಹಾರಿ ಹೋಗಿದ್ದರು ಮತ್ತೆ ಬಂದೆ ಬರುತ್ತೆ ಅನ್ನೋ ವಿಶ್ವಾಸ ಅದಮ್ಯವಾಗಿದೆ. ಗಿಳಿಯೊಂದಿಗೆ ಮಾತನಾಡಿದ ಪ್ರತಿ ಮಾತು ಮನದ ಮುಗಿಲಿನಲ್ಲಿ ಮೆಘಗಳಾಗಿ ಮಳೆ ತಂದಿವೆ. ಮಳೆಗಾಲದ ಚಳಿಯಲ್ಲಿ ನೆನಪುಗಳು ಬೆಚ್ಚಗಿನ ಹೊದಿಕೆಯಾಗಿವೆ. ನೆನಪುಗಳ ಮಾತು ಮಧುರವಾಗಿದೆ.

ಪ್ರಪಂಚ ಚಿಕ್ಕದಾಗಿದೆ ಮತ್ತೆ ನಾವು ಸಿಗುತ್ತೇವೆ ಅನ್ನೋ ವಿಶ್ವಾಸವಿದೆ. ನಮ್ಮ ಸ್ನೇಹ ಹೀಗೆ ಚಿರಕಾಲವಿರುತ್ತೆ ಅನ್ನೋ ನಂಬಿಕೆಯಂತು ಯಾವತ್ತು ಇದೆ.

Life is beautiful

ಎಂದಿನಂತೆ mail check ಮಾಡುತ್ತಿರುವಾಗ ಇದ್ದಕ್ಕಿದ್ದಂತೆ contacts listನಲ್ಲಿದ್ದ ಆ ಹೆಸರು ಮಾತ್ರ orange color ಅಲ್ಲಿ ಬ್ಲಿಂಕ್ ಆಗಿ browser'ನ ಮೂಲೆಯೊಂದರಲ್ಲಿ ಅದೇ ಹೆಸರಿನ ಚಿಕ್ಕ popup window ಒಂದು ಓಪನ್ ಆಗಿತ್ತು. ಆಗ ತಾನೇ ಹುಟ್ಟಿದ್ದ ಆ popup window ಇನ್ನು ರಕ್ತಸಿಕ್ತವಾಗಿತ್ತು. ಅದರಮ್ಮ ಕುಡಿದ ಹಾಲಿನ ಕೆಸರಿಯಲ್ಲಾ ಅದನ್ನು ಮೆತ್ತಿಕೊಂಡಂತಿತ್ತು. ನನ್ನನ್ನು ನೋಡಿ ತನ್ನ ಕಣ್ಣು ಮಿಟುಕಿಸುವಂತಿತ್ತು. ಅದರ ಎದೆಯಲ್ಲಿ Hi! How r u? ಅನ್ನೋ ಎರಡು ಸಾಲುಗಳು ಮೂಡಿದ್ದವು. ನನಗರಿವಿಲ್ಲದಂತೆ ನಾನು VGM!!! Iam fine, How abt u? ಅಂತ ಟೈಪ್ ಮಾಡಿದ್ದೆ ಆ popup window'ನ ಬಣ್ಣ ಹಸಿರಾಗಿತ್ತು ನಮ್ಮ ನಡುವಿನ ಸಂಭಾಷಣೆ ಬೆಳದು ಬಿಟ್ಟಿರುವ ಸಂಕೇತದಂತೆ.

Hi! How r u? ಅಂತ ಶುರುವಾದ ನಮ್ಮ ಸಂಭಾಷಣೆ ನಮ್ಮ ಕೆಲಸಗಳ ಸುತ್ತ ಎರಡು ಗಿರಕಿ ಹೊಡೆದು I am fine ... doing good... ಅನ್ನೋ ಮತ್ತೆರಡು ಸಾಲುಗಳಾಗಿತ್ತು. ನಾವಿಬ್ಬರು ಒಂದೇ ಕಾಲೇಜಿನಲ್ಲಿ ಓದಿದ್ದರು ಈಗ ಬೆಂಗಳೂರೆಂಬ ಮಹಾಸಮುದ್ರದಲ್ಲಿ ಕನಸುಗಳ ಬಲೆ ಒಡ್ಡಿ ಯಶಸ್ಸಿನ ಮುತ್ತು ಹುಡುಕುತ್ತಿರುವ ಇನ್ನೂ ಎಷ್ಟೋ ಗೆಳೆಯರ ಬಳಗದ ಇಬ್ಬರು ಸದಸ್ಯರು ಮಾತ್ರ. ಬೆಂಗಳೂರಲ್ಲಿ ನಮ್ಮದೇ ಒಂದು ಸಣ್ಣ ಗೆಳೆಯರ ಬಳಗವಿದೆ. ಪರಸ್ಪರ ನಮ್ಮ ನಡುವೆ ಪ್ರೀತಿ, ವಿಶ್ವಾಸ ಮತ್ತು ಗೌರವವಿದೆ.

ಆವತ್ತು ಯಾಕೋ ಅವಳು ಬೇರೆಯವರಂತೆ ಬೆಂಗಳೂರನ್ನು ಮತ್ತು ಇಲ್ಲಿನ ವೇಗದ ಜೀವನವನ್ನು ದೂಷಿಸಿದ್ದಳು. ಇಲ್ಲಿನ mechanic life ಬಗ್ಗೆ ಜಿಗುಪ್ಸೆ ವ್ಯಕ್ತಪಡಿಸಿದ್ದಳು. ಬದಲಾಗುತ್ತಿರುವ life style'ನ ಸುತ್ತ ಗಿರಕಿ ಹೊಡೆದ ನಮ್ಮ ಸಂಭಾಷಣೆಯಲ್ಲಿ ನಾವಿಬ್ಬರು ಜೀವನದ ಬಗೆಗಿನ ನಮ್ಮ ನಮ್ಮ ತರ್ಕಗಳನ್ನು ಹಂಚಿಕೊಂಡೆವು. ನನ್ನ ತರ್ಕಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಇದನ್ನು ನಿನ್ನ ಬ್ಲಾಗ್ನಲ್ಲೇಕೆ publish ಮಾಡಬಾರದು ಅಂತ ಬೆನ್ನು ತಟ್ಟಿದ್ದೇ ನಾನು ಅದರ ಬಗ್ಗೆ ಬರೆಯಲು ಕುಳಿತಿದ್ದೆ, ನನ್ನ ಮೇಲಿನ ವಿಶ್ವಾಸಕ್ಕೆ ಗೌರವಕ್ಕೆ ಅವಳಿಗೆ ಥ್ಯಾಂಕ್ಸ್ ಹೇಳುತ್ತಾ.

"Life is beautiful" ಬದುಕಿನ ಬಗೆಗೆ ಯಾರೋ ಪುಣ್ಯಾತ್ಮ ಹೇಳಿರುವ ಈ ಸಾಲು ನನಗೆ ನಿತ್ಯ ಸ್ಫೂರ್ತಿ and not to forget "Beauty lies in the eyes of the beholder" ಎನ್ನುವಂತೆ ನಿಮ್ಮ ಬದುಕು beautiful ಆಗಿ ಕಾಣಿಸುತ್ತಿಲ್ಲವೆಂದರೆ one 100% ನಿಮ್ಮ ನೋಟ ಸರಿಯಾಗಿಲ್ಲ.

"Happiness" ಅನ್ನೋದು ಗಣಿತದ ಸಿದ್ದ ಸೂತ್ರವಲ್ಲ. ಅದಕ್ಕೆ ಅದರದ್ದೇ ಆದ ಒಂದು definition ಅಂತ ಇಲ್ಲ. ಅದು ನಮ್ಮೊಳಗೆ ಇದೇ ನಮ್ಮ ಉಸಿರಲ್ಲಿ ಉಸಿರಾಗಿ. Ultimately its you who define happiness for yourself. ಫುಟ್ಪಾತನಲ್ಲಿ ತಿರುಗಿಕೊಂಡಿರುವ ಒಂದು ಅನಾಥ ಮಗು ಕೂಡ ಸುಖವಗಿರುತ್ತೆ, ಅದರ ಮುಖದಲ್ಲಿ ನಗುವಿರುತ್ತೆ ಕಾರಣ he has defined his happiness. ಸುಖವಾಗಿರಲು ಮೊದಲು you have to define your own happiness, define your own world ಹಾಗೇ ನಿಮ್ಮ ಸುತ್ತ ಸೃಷ್ಟಿಸಿಕೊಂಡ ಜಗತ್ತಲ್ಲಿ ಬರಿ ಒಳ್ಳೆಯವರಿಗೆ ಮತ್ತು ಒಳ್ಳೆಯದಕ್ಕೆ ಮಾತ್ರ ಸ್ಥಾನ ಕೊಡಿ. ನಿಮ್ಮ ಜಗತ್ತಲ್ಲಿ ನೀವೂ ಆಯ್ದ ಪ್ರಾಣಿ ಪಕ್ಷಿಗಳಿರಲಿ, ನೀವೇ ಆಯ್ದ ನಿಮ್ಮ ಪ್ರೀತಿ ಪಾತ್ರದವರಿರಲಿ, ನೀವೂ ಇಷ್ಟಪಟ್ಟ ಗಿಡ ಮರಗಳಿರಲಿ, ಹಾಗೇ ಮುಖ್ಯವಾಗಿ ನಿಮ್ಮ ಪ್ರಪಂಚದಲ್ಲಿ ನೀವೇ ದುಡ್ಡನ್ನೋ ಆ ಹಾಳೆಗೆ ಬೆಲೆ ನಿರ್ಧರಿಸಿ and now say what is happiness for you!

ನಾನು ಚನ್ನಾಗಿ ದುಡಿಬೇಕು, ದುಡಿದು ಹೆಚ್ಚು ಹೆಚ್ಚು ಸಂಪಾದಿಸಬೇಕು, ಸಂಪಾದಿಸದಮೇಲೆ ನಮ್ಮೂರಲ್ಲಿ ನೆಲೆಗೊಳ್ಳಬೇಕು ಅನ್ನೋದೆಲ್ಲ ಕೂಸು ಹುಟ್ಟೊಕ್ಕಿಂತ ಮುಂಚೆ ಕುಲಾಯಿ ಹೊಲೆದಂತೆ. ಈ ಭೂಮಿಯ ಮೇಲೆ ಎಲ್ಲವನ್ನು ಸೃಷ್ಟಿಸಿದ ಆ ದೇವರು 'ನಾಳೆ'ಯನ್ನು ಸೃಷ್ಟಿಸಲು ಮರೆತು ಬಿಟ್ಟ. ಇಲ್ಲಿ ಇಂದು ಅನ್ನೋದು ಮಾತ್ರ ಸತ್ಯ, ನಾಳೆ ಅನ್ನುವದು ಬರಿ ಕಲ್ಪನೆ ಮತ್ತು ಕನಸು. ಯಾರಿಗೇ ಗೊತ್ತು ನೀವು ಎಲ್ಲವನ್ನು ಸಂಪಾದಿಸಿದ ಮೇಲೆ ನಿಮ್ಮೊಂದಿಗೆ ನಿಮ್ಮ ಸಂತೋಷ ಮತ್ತು ಪ್ರೀತಿ ಹಂಚಿಕೊಳ್ಳಲು ನಿಮ್ಮವರು ಅಂತ ಯಾರಾದರು ಇರುತ್ತಾರೋ ಇಲ್ಲವೊ? ಯಾರಿಗೇ ಗೊತ್ತು ಕಲ್ ಹೋ ನ ಹೋ. Is that how you want to define your happiness ? ಪರೀಕ್ಷೆ ಮುಗಿದ ಮೇಲೆ happiness'ನ definition ಗೊತ್ತಾದರೆ ಏನು ಪ್ರಯೋಜನ? ಜೀವನದಲ್ಲಿ there are no supplementary exams ಅಂತ ಅನ್ನಿಸುವದಿಲ್ಲವೇ.

ನೀವು ಮಾಡುವ ಪ್ರತಿ ಸಣ್ಣ ಪುಟ್ಟ ಕೆಲಸವನ್ನು ಪ್ರೀತಿಯಿಂದ ಮಾಡಿ. ಆ ಕೆಲಸದಲ್ಲಿಯೇ ಪ್ರೀತಿಯನ್ನು ಸಂತೋಷವನ್ನು ಕಾಣಿ. ಹಾಗೇ ಪ್ರತಿ ಮನುಷ್ಯನಲ್ಲಿರುವ ಒಳ್ಳೆಯದನ್ನ ಮಾತ್ರ ಆರಿಸಿಕೊಳ್ಳಿ. ಪ್ರತಿಯೊಬ್ಬರನ್ನು ಅವರ ಒಳ್ಳೆಯ ಗುಣಕ್ಕಾಗಿ ಹೃದಯ ತುಂಬಿ ಹರಿಸಿ. ಅವರ ಸಂತಸದಲ್ಲಿ ನಿಮ್ಮ ಸಂತಸವನ್ನು ಕಾಣಿ. ನೀವು ಬೇರೆಯವರನ್ನು ಖುಷಿ ಪಡಿಸಿದಾಗ ಮಾತ್ರ ನಿಮ್ಮನ್ನು ಬೇರೆಯವರು ಖುಷಿ ಪಡಿಸುತ್ತಾರೆ. ಸೃಷ್ಟಿಯ ನಿಯಮವೇ ಅಷ್ಟು 'Give and Take' thats what keeps you going ಇಲ್ಲಾಂದ್ರೆ ನೀವು ನಿಂತ ನೀರಂತಾಗಿ ರೋಗಗಳ ಆಗರವಾಗುತ್ತೀರಿ.

ನಮ್ಮ ಹಿರಿಯರನ್ನ ನೋಡಿ ಅವರೆಷ್ಟು ನಿಸ್ವಾರ್ಥ ಪ್ರೀತಿ ಹೊಂದಿದ್ದರು. ಅವರಲ್ಲಿ ಜೀವನದ ಬಗ್ಗೆ ತಾಳ್ಮೆಯಿತ್ತು, ವಿಶ್ವಾಸವಿತ್ತು. ಅಷ್ಟೆ ಮುಖ್ಯವಾಗಿ they had passion towards life. ಅವರು ಎಲ್ಲದರಲ್ಲೂ ಪ್ರೀತಿಯನ್ನು ಹುಡುಕುತ್ತಿದ್ದರು. ನಮ್ಮಲ್ಲಿ ಎಷ್ಟು ಜನರ ತಂದೆ ತಾಯಿ shares, mutual funds ಅಂತ ತಲೆ ಕೆಡಸಿಕೊಳ್ಳುತ್ತಿದ್ದರು ಹೇಳಿ? hardly few ಅಲ್ವಾ? ಹೌದು they invested love and got happiness in returns, ಆದರೆ ನಾವು?

ನಾವು ಸಂತೋಷವಾಗಿರಲು ಬೇರೆಯವರನ್ನು ಸಂತೋಷ ಪಡಿಸಬೇಕು ಹಾಗೇ when you love somebody love them unconditionally. ಪ್ರೀತಿಗೆ ನಿಯಮಗಳು ಕಟ್ಟುಪಾಡುಗಳು ಇರಬಾರದು, ಹಾಗೇ ನಿಮ್ಮ ಪ್ರೀತಿಯನ್ನ express ಮಾಡಲು ಮಾತ್ರ ಮರೆಯಬೇಡಿ. when you love somebody tell them that you care for them and you love them, that makes them feel happy too. ಸಂಬಂಧಗಳ ಬುನಾದಿಯೇ ಪ್ರೀತಿ ಮತ್ತು ವಿಶ್ವಾಸ. Caring and being cared, loving and being loved is what relationships are all about. ಹಾಗೇ love for what they are and not for what you want them to be.

ಪ್ರೀತಿ ಮತ್ತು ಸಂತೋಷ ಹೂವಿನ ಸುಗಂಧದ ಹಾಗೇ it spreads, keep the fragrance in you ಅಷ್ಟೆ. ನೀವು ಇದೆಲ್ಲಾ ಪುಸ್ತಕದ ಬದನೇಕಾಯಿ ಅಂತ ಅನ್ಕೊಬಹುದು ಆದರೆ ಅಂತಹ ಬದನೇಕಾಯಿ ತರಲು ನಾವು market'ಗೆ ಹೋದಾಗ ತುಂಬಾ ಫ್ರೆಶ್ ಆಗಿರುವ ಬದನೆಕಾಯಿಯನ್ನ ಆರಿಸಿ ತರುವಂತೆ when you are filled with happiness and when the fragrance of happiness is with you ಸೃಷ್ಟಿಯ ನಿಯಮದಂತೆ ಬೇರೆಯವರು ನಿಮ್ಮತ್ತ ಆಕರ್ಷಿತರಾಗುತ್ತಾರೆ. ನಿಮ್ಮನ್ನು ನೋಡಿ ನಿಮ್ಮಂತೆ ಯೋಚಿಸುತ್ತಾರೆ. ನಿಮ್ಮ ಸಂಗಡದಲ್ಲಿ ಸಿಕ್ಕ ಪ್ರೀತಿಗಾಗಿ ನಿಮ್ಮೊಂದಿಗಿರುತ್ತಾರೆ ಹಾಗೇ ಬೇರೊಬ್ಬರಿಗೆ ಅದನ್ನ ಹಂಚುತ್ತಾರೆ and the fragrance keeps on spreading and not to forget even a tiny grass holds a little soil during erosion ನಮ್ಮ ನಿಮ್ಮಲ್ಲಿ ಆ ಶಕ್ತಿ ಇದೆ.

ಕೊನೆಗೆ ಒಂದು ಸಣ್ಣ excercise which I always do. ಈ excercise ನಿಮ್ಮಲ್ಲಿ ಖಂಡಿತ ವ್ಯತ್ಯಾಸವನ್ನು ತರುತ್ತೆ, I can guarantee you on that. ನೀವು ದೇವರನ್ನು ಅವನು ಕೊಟ್ಟಿರುವುದಕ್ಕಾಗಿ ಪ್ರೀತಿಸಿ, thank god for all that he has given atleast ದಿನಕ್ಕೊಂದು ಬಾರಿ. ರಾತ್ರಿ ಮಲಗುವ ಮುನ್ನ ಕಣ್ಣು ಮುಚ್ಚಿ ಒಮ್ಮೆ thank god for all that he has given ಹಾಗೇ ಆ ದಿನ ನಿಮ್ಮನ್ನ ಸಂತೋಷ್ ಪಡಿಸಿದ atleast ಐದು ಜನರ ಹೆಸರನ್ನು ನೆನಪಿಸಿಕೊಳ್ಳಿ. You may find it difficult in the beginning but dont forget to do it. ಆಮೇಲೆ ನೀವೇ ನೋಡಿ ದಿನ ಕಳೆದಂತೆ you will notice that you have a few names in common, ದಿನಾ ನಿಮ್ಮ list ನಲ್ಲಿ atleast ಒಂದು ಹೆಸರಾದರು repeat ಆಗುತ್ತಿರುತ್ತೆ and for sure they are the people who cares you and who you care for. ಅಂತವರ ಬಗ್ಗೆ ಪ್ರೀತಿ ಇರಲಿ and express it, ultimately thats what makes life beautiful. ಹಾಗೇನೆ ಪ್ರತಿ ದಿನ ನಿಮ್ಮ ತಂದೆ ತಾಯಿಗೆ ಫೋನ್ ಮಾಡಲು ಮರೆಯಬೇಡಿ ಅಲ್ಲೊಂದು ಜೀವ ನಿಮಗಾಗಿ ಕಾದಿರುತ್ತೆ.

ಪ್ರೀತಿ ಮತ್ತು ಸಂತೋಷ ಹಂಚಿ ಕೊಂಡು ತಿನ್ನುವಂತವು ಬಚ್ಚಿಟ್ಟರೆ ಕೊಳೆತು ಹೋದಾವು ಜೋಕೆ!

Tuesday, July 15, 2008

ಭಾಷಾಭಿಮಾನ



ಮೊನ್ನೆ IT ನಗರಿಯ ಟ್ರಾಫಿಕ್ ಜಾಮ್ನಲ್ಲಿ ಈ ಆಟೋ ನನ್ನ ಕಣ್ಣು ಸೆಳೆಯಿತು ಯಾಕೋ ಆ ಎರಡು ಸಾಲುಗಳು ನನ್ನ ಮನಸ್ಸಿನ ಬಾಗಿಲು ತಟ್ಟಿದ್ದವು ಇಣುಕಿ ನೋಡಲು ಪರಿಚಿತವೆನಿಸಿದ್ದವು ಹತ್ತಿರದ ಸಂಬಂಧಿಯಂತೆ


"ಕಾವೇರಿ ನೀರು ಕುಡಿಯುವ ಮೊದಲು ಕನ್ನಡ ಕಲಿ

ಕರ್ನಾಟಕದ ಅನ್ನ ತಿನ್ನುವ ಮೊದಲು ಕನ್ನಡಿಗರ ಸಂಸ್ಕೃತಿ ಕಲಿ"


ಪ್ರತಿಯೊಬ್ಬ ಕನ್ನಡಿಗನಂತೆ ಆ ಕ್ಷಣ ನನಗೆ ಹೆಮ್ಮೆ ಅನ್ನಿಸಿತು ಆದರೆ ಆ ಎರಡು ಸಾಲಲ್ಲಿ aggression ಇತ್ತು ಬಲವಂತವಿತ್ತು ಆದರೆ ಇದು ಎಷ್ಟು ಸರಿ? ಜಾಗತೀಕರಣದ ಈ ಯುಗದಲ್ಲಿ ನಮ್ಮ ಸುತ್ತ ನಾವೇ ಹೀಗೆ ಬೇಲಿ ಹಾಕಿ ಕೊಳ್ಳುವುದು ಎಷ್ಟು ಸೂಕ್ತ? ಬಲವಂತದ ಮದುವೇ ಎಷ್ಟು ದಿನ? ಅತಿಥಿ ದೇವೋಭವ ಅನ್ನೋ ನಾಡಲ್ಲಿ ಹೀಗೆ ನಾವು ನಮ್ಮ ಮನೆಯ ಸುತ್ತ ಮುಳ್ಳು ಬೇಲಿ ಹಾಕಿಕೊಂಡರೆ ಅದು ನಮ್ಮ ದೌರ್ಬಲ್ಯವೆನಿಸುವದಿಲ್ಲವೇ? ನಮ್ಮ ಅಸಹಾಯಕತೆ ಅನ್ನಿಸುವುದಿಲ್ಲವೇ?


ಪ್ರತಿಯೊಬ್ಬರಿಗೂ ನಮ್ಮ ಊರು ನಮ್ಮ ನಾಡು ಅನ್ನೋ ಪ್ರೀತಿ ಸರ್ವೆ ಸಾಮಾನ್ಯ ಹಾಗೇ ಇಂತಾ ಪ್ರೀತಿ ತರುವ ಸ್ವಾರ್ಥನು ಸಮರ್ಥನೀಯ ಹಾಗಂತ ನಾವು ಬಲವಂತವಾಗಿ ಏನನ್ನು ಸಾಧಿಸಲು ಸಾದ್ಯವಿಲ್ಲ ಅಲ್ಲವೇ? ಬಲವಂತವಾಗಿ ಸೀತೆಯ ಹೊತ್ತು ಕೊಂಡು ಹೋದ ರಾವಣನಿಗೆ ಸಿಕ್ಕಿದ್ದಾದರೂ ಏನು?


ಮಕ್ಕಳು ದೇವರಂತೆ ಅಂತಹ ಯಾವುದೇ ಮಗುವನ್ನು ನೋಡಿದರೆ ಸಾಕು ನಮ್ಮ ಮುಖದಲ್ಲಿ 100 watt ನಗೆಯೊಂದು ಮುಡಿರುತ್ತೆ ಭಾಷೆ, ಬಣ್ಣ, ಮತ ಯಾವುದರ ಹಂಗಿಲ್ಲದಂತೆ ಭಾಷೆಗಳು ಹಾಗೇನೆ ಅವು ಮಕ್ಕಳಂತೆ ಬಣ್ಣ ಬಣ್ಣದ ಹೂಗಳಂತೆ ಬಣ್ಣ ಪರಿಮಳ ಬೇರೆ ಬೇರೆಯಾದರು ಆವುಗಳು ಒಂದೇ ನಮ್ಮ ಭಾಷೆಯ ಮೇಲೆ ಪ್ರೀತಿ ಇರುವಂತೆ ಬೇರೆ ಭಾಷೆಯ ಮೇಲೆ ದ್ವೇಷವಿರಕೂಡದು. ನಮ್ಮ ಭಾಷೆನ ಬಲವಂತವಾಗಿ ಬೇರೆಯವರಿಗೆ ಕಲಿಸುವದರಿಂದ ಏನು ಲಾಭವಿಲ್ಲ ಬದಲಾಗಿ ಭಾಷೆಯ ಕಟ್ಟುವ ಕೆಲಸವಾಗಬೇಕು ನಮ್ಮ ಭಾಷೆಯನ್ನ ನಾವು ಮುದ್ದಾಡಬೇಕು ಅದು ಬಿಟ್ಟು ನಮ್ಮ ಮಗುವನ್ನ ಪಕ್ಕದಮನೆಯವರು ಮುದ್ದಾಡಲಿ ಅಂತ ಬಯಸೋದು ನಮ್ಮ ಮುರ್ಖತನವಾಗುತ್ತೆ ಅಲ್ಲವೇ? ಹಾಗೇ ಭಾಷೆ ಮತ್ತು ಸಂಸ್ಕೃತಿ ಅನುಕರಣೀಯ ನಾವು ಬೇರೆಯವರನ್ನು ನೋಡಿ ಕಲಿಯುವಂತೆ ನಮ್ಮನ್ನು ನೋಡಿ ಬೇರೆಯವರು ಕಲಿಯುತ್ತಾರೆ ಒಂದು ಸಂಸ್ಕೃತಿ ಹುಟ್ಟೋದೇ ಹಾಗೇ ಅದಕ್ಕೆ ನಾವು ನಮ್ಮ ಸಂಸ್ಕೃತಿಯನ್ನ ಸರಿಯಾಗಿ ಉಳಿಸಿಕೊಂಡು ಹೋಗ್ತಾ ಇದ್ದಿವಾ? ನಮ್ಮ ಸಂಸ್ಕೃತಿ, ನಮ್ಮ ಭಾಷೆ ಎಷ್ಟು ಮನೆ ಮನಗಳಲ್ಲಿ ಇದೆ ಅನ್ನುವುದರ ಅರಿವಾಗಬೇಕು ಹಾಗಾದಾಗ ಮಾತ್ರ ನಮ್ಮ ಸಂಸ್ಕೃತಿಯನ್ನು ನೋಡಿ ಅವರು ಅನುಕರಿಸುತ್ತಾರೆ ಭಾಷೆಯ ಸೊಗಡನ್ನು ಅರಿತುಕೊಳ್ಳುತ್ತಾರೆ ಹಾಗಾದಾಗ ಮಾತ್ರ ಭಾವೆನೆಗಳು ಭಾಷೆಯಾಗಿ ಹೊರ ಹೊಮ್ಮುತ್ತವೆ.


ಈಗ ಮತ್ತೆ ಅವೇ ಎರಡು ಸಾಲುಗಳನ್ನು ಹೀಗೆಂದರೆ ಹೇಗೆ


"ಕಾವೇರಿ ನೀರು ಕುಡಿಯಲು ಕನ್ನಡ ಕಲಿತಂತೆ


ಕರ್ನಾಟಕದ ಅನ್ನ ತಿನ್ನಲು ಕನ್ನಡಿಗರ ಸಂಸ್ಕೃತಿ ಕಲಿತಂತೆ"


ಈಗ ನೋಡಿ ನಮ್ಮ ಭಾವ ಎಷ್ಟೊಂದು ವಿಶಾಲವಾಗಿದೆ ನಮ್ಮ ಬಗ್ಗೆ ನಮಗೆ positive attitude ಮುಡಿದಂತಿದೆ ಅಲ್ಲವೇ? ಕಾವೇರಿ ನೀರು ಕುಡಿದವರೆಲ್ಲರು ಕನ್ನಡಿಗರು ನಮ್ಮ ನೆಲದ ಅನ್ನ ಉಂಡವರು ನಮ್ಮ ಸಂಸ್ಕೃತಿಯನ್ನು ಬಲ್ಲವರು


ನಮ್ಮ ಬಗ್ಗೆ ನಮಗೆ ವಿಶ್ವಾಸವಿದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಹಾಗೇ ಒಳ್ಳೆಯದನ್ನ ಬಯಸಿದಾಗ ಮಾತ್ರ ಒಳ್ಳೆಯದಾಗುವುದು ಅದಕ್ಕೆ ಅಲ್ಲವೇ "Wish Well, Be Well" ಅಂತ ಹೇಳೋದು.

ಗಂಟೆ ಹನ್ನೆರಡಾಗಿತ್ತು

ಕತ್ತಲೆಯ ರುದ್ರ ನರ್ತನಕ್ಕೆ ಬೆಳಕು ಸೋತು ಸುಣ್ಣವಾಗಿತ್ತು ಬೆಳಕನ್ನು ನುಂಗಿ ನೀರು ಕುಡಿದ ಕತ್ತಲೆ ಗೆದ್ದ ಸಂಭ್ರಮದಲ್ಲಿ ಬೀಗುತ್ತಲಿತ್ತು ಕತ್ತಲೆಯ ಆರ್ಭಟಕ್ಕೆ ತತ್ತರಿಸಿದ್ದ ಬೀದಿ ದೀಪಗಳು ತಮ್ಮ ಕೊನೆ ಉಸಿರು ಬಿಡುತ್ತಿರುವಂತೆ ಸಣ್ಣಗೆ ಉರಿಯುತ್ತಲಿದ್ದವು ಕತ್ತಲೆಯ ವಿಕಾರ ರೂಪ ಕಂಡು ನಾಯಿಗಳು ಊಳಿಡುತ್ತಿದ್ದವು ಇದೆಲ್ಲದರ ಮದ್ಯ ಮನುಷ್ಯ ಪ್ರಾಣಿ ಮಾತ್ರ ತನಗೇನು ಅರಿವಿಲ್ಲದಂತೆ ತನ್ನದಲ್ಲದ ಲೋಕದಲ್ಲಿ ವಿಹರಿಸುತ್ತಲಿತ್ತು.

ಕತ್ತಲೆಯ ಅಟ್ಟಹಾಸ ತನ್ನ ವಿಕಾರ ಸ್ವರೂಪದಲ್ಲಿರುವಾಗ ಸುತ್ತಲಿನ ಸ್ಮಶಾನ ಮೌನವನ್ನು ನೋಡಿ ಇದೆ ಸಮಯಕ್ಕೆ ಹೊಂಚು ಹಾಕಿ ಕುಳಿತಂತಿದ್ದ ಗಡಿಯಾರದ ದೊಡ್ಡ ಮುಳ್ಳು ಚಿಕ್ಕ ಮುಳ್ಳನ್ನು ಬಿಗಿಯಾಗಿ ತಬ್ಬಿಕೊಂಡಿತ್ತು ಮೊದ ಮೊದಲು ಚಿಕ್ಕ ಮುಳ್ಳು ಪ್ರತಿಭಟಿಸಿದಂತೆ ಹನ್ನೆರಡು ಸಾರಿ ಲಬ ಲಬ ಬಡಕೊಂಡರು ದೊಡ್ಡ ಮುಳ್ಳಿನ ಬಾಹು ಬಂಧನದಲ್ಲಿ ಶರಣಾಗಿತ್ತು ಸಮಯ ಕೈಜಾರಿ ಹೋಗಿತ್ತು ಗಡಿಯಾರದ ಗರ್ಭದಿಂದ ಮತ್ತೊಂದು ಹಕ್ಕಿ ಮರಿ ಹೊರಬಂದಿತ್ತು ಏನನ್ನೂ ಅರಿಯದ ಕಂದಮ್ಮ ಚಿಲಿಪಿಲಿಗುಟ್ಟಿತ್ತು ಕಾಲದ ಕೈ ಗೊಂಬೆಯಂತೆ

Saturday, July 12, 2008

ಬ್ಲಾಗಾಯಣ

ಹೀಗೆ ಬಹಳ ದಿನಗಳಿಂದ ಬರೆಯ ಬೇಕೆಂದುಕೊಂಡ ಕನ್ನಡ ಬ್ಲಾಗನ್ನು ಅಂತು ಇಂತು create ಮಾಡಿದ್ದೇನೆ. ಅದೇನೋ ಕನ್ನಡವೆಂದರೆ ವಿಶೇಷ ಪ್ರೀತಿ ಮಾತೃ ಭಾಷೆಯ ಸೇಳತವೆ ಹಾಗೆ ಅದಕ್ಕೆ ಏನೋ ತಿಳಿದವರು ಭಾವನೆಗಳು ಮಾತೃ ಭಾಷೆಯಲ್ಲಿ ಮಾತ್ರ ಅರಳಲು ಸಾದ್ಯ ಅಂತ ಹೇಳಿದ್ದು, ಮಾತೃ ಭಾಷೆಯ ಶಕ್ತಿಯೇ ಅಂತಹದ್ದು.

"ವಿಜಯ ಪರ್ವ" ನನ್ನ ಕನಸಿನ ಪರ್ವ ಕಾಲ, ಇಲ್ಲಿ ನನ್ನ ಕನಸುಗಳು ಹೂಬಿಟ್ಟು ನಿಲ್ಲಲು ನಿಮ್ಮ ಹಾರೈಕೆ ಬೇಕು. ನನ್ನ ಕನಸಿನ ಕೂಸನ್ನು ಏತ್ತಿ ಆಡಿಸಿ ಮುದ್ದಾಡುತ್ತೀರಿ ಎಂಬ ನಂಬಿಕೆಯಲ್ಲಿ ನಿಮ್ಮವ ವಿಜಯ... ಹಾಗೆ ತಪ್ಪಿದ್ದಾಗ ತಿದ್ದಿ ಬುದ್ದಿ ಹೇಳಲು ಮರೆಯಬೇಡಿ.