Saturday, August 30, 2008

ಪೂರ್ವಿ

ಕಿಶೋರನ ಮೆಸೇಜ್ ಬಂದಾಗಿನಿಂದ ಪೂರ್ವಿ ಪೂರ್ವಿಯಾಗಿರಲಿಲ್ಲ, ಅವಳಲ್ಲಿ ಏನೋ ಹೊಸತನ ಉಕ್ಕಿ ಹರಿಯುತಿತ್ತು, ಮನಸ್ಸು ಹಗುರವಾಗಿತ್ತು ಪ್ರೀತಿಯ ಗಾಳಿಗೆ ಸಿಕ್ಕ ಸೂತ್ರವಿಲ್ಲದ ಗಾಳಿಪಟದಂತೆ. ಮನದಲ್ಲಿ ಸಂಭ್ರಮ ಮನೆ ಮಾಡಿತ್ತು. ಮನಸ್ಸು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿತ್ತು.ಪೂರ್ವಿ ತನ್ನನ್ನು ತಾನೇ ನಂಬಲಾರದಂತಾಗಿ ಮತ್ತೆ ಮತ್ತೆ ತನ್ನ ಮೊಬೈಲಿನಲ್ಲಿ displayಯಾದ ಕಿಶೋರನ messageನ್ನ ಓದಿದಳು. "ಪೂರ್ವಿ, ನಿನ್ನೊಂದಿಗೆ ಮನಸ್ಸು ಬಿಚ್ಚಿ ತುಂಬ ಮಾತನಾಡುವದಿದೆ ಬಹಳ ದಿನಗಳಿಂದ ನನ್ನಲ್ಲೇ ಮುಚ್ಚಿಟ್ಟ ಒಂದು ಮುಖ್ಯವಾದ ವಿಷಯವನ್ನ ಹೇಳುವದಿದೆ, ನನ್ನ ಮನಸ್ಸೆಂಬ ಗರ್ಭದಲ್ಲಿ ಚಿಗುರಿದ ಈ ಪ್ರೇಮದ ಕುಡಿಯನ್ನ ನನ್ನೊಳಗೆ abort ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ please ಸಂಜೆ ಗಣೇಶನ ದೇವಸ್ಥಾನದ ಪಕ್ಕಕಿರುವ parkಗೇ ಬಂದು ಬಿಡು, please ಪೂರ್ವಿ". ಅವಳ ಇಡೀ ಜಗತ್ತನ್ನೇ ಒಂದು ಕ್ಷಣ ನಿಲ್ಲಿಸುವ ಶಕ್ತಿ ಹೊಂದಿದ್ದ ಸಾಲುಗಳವು.

ಪೂರ್ವಿಗೆ ಕಿಶೋರನ ಪರಿಚಯವಾದದ್ದು ಅವಳ ಸರ್ವಸ್ವವೇ ಆಗಿದ್ದ ಅವಳ ಬಾಲ್ಯದ ಗೆಳತಿ ಕಲ್ಯಾಣಿಯಿಂದ. ಬದುಕೆಂಬ ಬಿರುಗಾಳಿಗೆ ಸಿಕ್ಕಿ ಈಗ ಹೀಗೆ ಬೆಂಗಳೂರೆಂಬ ಮಹಾನಗರದಲ್ಲಿ ತಂದೆ ತಾಯಿಯರನ್ನ ಬಿಟ್ಟು ಪೂರ್ವಿ ಮತ್ತು ಕಲ್ಯಾಣಿ ಒಂದೇ PGಯಲ್ಲಿ ಇರುತ್ತಾ ನಾಲ್ಕು ವರ್ಷಗಳಾಗಿದ್ದವು. ಪೂರ್ವಿಗೆ ಕಲ್ಯಾಣಿ, ಕಲ್ಯಾಣಿಗೆ ಪೂರ್ವಿ ಎಂದೂ ಬೇರೆಯವರ ತಂಟೆಗೆ ಹೋಗಲಾರದ ಜೀವಗಳವು. ಬಾಲ್ಯದಲ್ಲಿ ಎಲ್ಲದರಲ್ಲೂ ಜೊತೆಯಾಗಿದ್ದ ಪೂರ್ವಿ ಮತ್ತು ಕಲ್ಯಾಣಿಯನ್ನ ಬೆಂಗಳೂರು ಮೊದಲ ಬಾರಿಗೆ ದಿನದ ಎಂಟರಿಂದ ಒಂಬತ್ತು ಗಂಟೆ ದೂರಮಾಡಿತ್ತು, ಅವರ ಆಸೆಯ ವಿರುದ್ಧವಾಗಿ ಇಬ್ಬರಿಗೂ ಬೇರೆ ಬೇರೆ ಕಡೆ ಕೆಲಸ ಸಿಕ್ಕಿತ್ತು. ಆದರು ಇವರಿಬ್ಬರೂ ಮಾತ್ರ chat, mail, sms, mobile ಅಂತ ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಕಾಲನಿಗೆ ಸೆಡ್ಡು ಹೊಡೆದಿದ್ದರು.

ಕಲ್ಯಾಣಿ ಕೆಲಸ ಮಾಡುತ್ತಿದ್ದ MNCಯಲ್ಲಿ ಕಿಶೋರ್ team lead ಆಗಿದ್ದವನು. ಕಲ್ಯಾಣಿಯ ಶ್ರದ್ದೆ, ಮುಗ್ದತೆ, ಕೆಲಸದೆಡೆಗಿನ ಅವಳ dedication ಕಿಶೋರನನ್ನ ಅವಳತ್ತ ಆಕರ್ಷಿಸಿದ್ದವು, ಆಕರ್ಷಣೆ ಪರಿಚಯವಾಗಿತ್ತು, ಪರಿಚಯ ಸ್ನೇಹವಾಗಿತ್ತಷ್ಟೆ. ಕಲ್ಯಾಣಿಗು ಕೆಶೋರನೆಂದರೆ, ಅವನು ಕೆಲಸ ಮಾಡುವ ರೀತಿ ನೀತಿಯಲ್ಲಾ ಅಚ್ಚು ಮೆಚ್ಚು, ಅವಳಿಗೂ ಅವನಾಗುವ ಇಷ್ಟ ಅವನಂತೆ ಶ್ರದ್ದೆಯಿಂದ ಕೆಲಸ ಮಾಡುವ ಆಸೆ. ಅವನಂತೆ careerನಲ್ಲಿ ಸಾಧಿಸುವ ಹುಚ್ಚು. carrer ಎಂಬ ladderನ ತುತ್ತ ತುದಿಗೆ ನಿಲ್ಲುವ ಹಂಬಲ.

ಹೀಗೆ ಕಿಶೋರನ ಕೆಲಸದತ್ತ ಅಕರ್ಷಿತವಾಗಿದ್ದ ಕಲ್ಯಾಣಿ ರಾತ್ರಿಯಲ್ಲ ಪೂರ್ವಿಯ ಹತ್ತಿರ ಕಿಶೋರನ ಗುಣಗಾನ ಮಾಡುತ್ತಿದ್ದಳು. ಕಿಶೋರ್ ಹಂಗೇ ಹಿಂಗೇ you know he is brilliant, ಪೂರ್ವಿ ಇವತ್ತು ಏನಾಯ್ತು ಗೊತ್ತ client raise ಮಾಡಿದ್ದ critical issue ಒಂದನ್ನು ಕಿಶೋರ್ within a fraction of second ಅಲ್ಲಿ fix ಮಾಡಿಬಿಟ್ಟ ಕಣೇ ಅದೂ without debugging ಕಣೇ ಹ್ಯಾಟ್ಸ್ ಆಪ್ ಟು ಕಿಶೋರ್. ಅವನ ಹತ್ತಿರ ಯಾವುದಾದರು problem ಕೇಳಿದರೆ ಸಾಕು ಯಾವ fileನಲ್ಲಿ ಯಾವ lineನಲ್ಲಿ defect ಇದೇ ಅಂತ ಹೇಳ್ತಾನೆ . He is genious ಕಣೇ, ಅಪ್ಪಾ ಅವನನ್ನ no one can beat in coding ಪೂರ್ವಿ, ಅಂತೆಲ್ಲಾ ಕಿಶೋರನ ಹೊಗಳಲು ಕಲ್ಯಾಣಿ ಹತ್ತಿರ ಶಬ್ದಗಳೇ ಇರುತ್ತಿರಲಿಲ್ಲ.

ಪೂರ್ವಿಗೆ ರಾತ್ರಿ ನಿದ್ದೆ ಬರೋವರೆಗೂ ಕಿಶೋರ್ ಹೀಗಿರಬಹುದೇ ಹಾಗಿರಬಹುದೇ ಅಂತ ಕಲ್ಪನೆ ಮಾಡುವದೊಂದೇ ಕೆಲಸ, ಯೋಚನೆ ಮಾಡುತ್ತ ನಿದ್ರೆಗೆ ಜಾರಿದ ಅನುಭವನು ಪೂರ್ವಿಗೆ ಗೊತ್ತಾಗುತ್ತಿರಲಿಲ್ಲ, ಪೂರ್ವಿಯ ಕನಸಲ್ಲಿ ಕುದರೆ ಏರಿ ಬರುತ್ತಿದ್ದ ರಾಜಕುಮಾರ ಈಗೀಗ ಸ್ಪಷ್ಟವಾಗಿ ಕಂಡಂತ ಅನುಭವ. ಪೂರ್ವಿಗೆ ಕಿಶೋರ್ ನನ್ನ ನೋಡಿರದಿದ್ದರೂ ಅವನು ಪರಿಚಿತವೆನಿಸಿದ್ದ, ಅವನ ಜೊತೆಗೆ ಮಾತಾಡಿದ ನೆನಪು, ಗುದ್ದಾಡಿದ ನೆನಪು, ಕಿಶೋರ್ ದಿನ ಕಳೆದಂತೆ ಅವಳ ಮನೆ ಮನಸ್ಸನ್ನ ತುಂಬಿ ನಿಂತಿದ್ದ. ಅವಳ ಕನಸಿನ ರಾಜಕುಮಾರ ಕನಸಿನಾಚೆಗೂ ಬಂದಂತ ಅನುಭವ, ಅವಳ ಕೈ ಹಿಡಿದು ಮುತ್ತಿಟ್ಟ ಮಧುರ ಸಿಂಚನ. ಪೂರ್ವಿ ಮೊದಲ ಬಾರಿಗೆ ಪ್ರೀತಿಯ ಕಡಲಲ್ಲಿ ಮಿಂದಿದ್ದಳು. ಅವನು ಯಾರು ಹೇಗಿದ್ದಾನೆ ಅನ್ನೋ ಗೊಡೆವೆಗು ಹೋಗದೆ.

ಪೂರ್ವಿ ಮತ್ತು ಕಲ್ಯಾಣಿಯ ಜಗತ್ತಿಗೆ ಮತ್ತೊಬರ ಪ್ರವೇಶವಾಗಿತ್ತು. ಕಲ್ಯಾಣಿಯಿಂದಾಗಿ ಪೂರ್ವಿಗೆ ಕಿಶೋರನ ದರ್ಶನ ಭಾಗ್ಯ ಅಂದುಕೊಂಡಕ್ಕಿಂತ ಬೇಗ ಸಿಕ್ಕಿತ್ತು, ಪರಿಚಯ ಸ್ನೇಹವಾಗಲು ಬಹಳ ದಿನಗಳು ಬೇಕಾಗಲಿಲ್ಲ. ಕಿಶೋರನು ಪೂರ್ವಿಯ ಸ್ನಿಗ್ಧ ಸೌಂದರ್ಯಕ್ಕೆ ಬೆಕ್ಕಸ ಬೆರಗಾಗಿದ್ದ, ಮೊದಲ ನೋಟದಲ್ಲಿ ನಿಮ್ಮನ್ನ ನೋಡಿದರೆ ಹುಣ್ಣಿಮೆ ಚಂದ್ರನು ಹೊಟ್ಟೆ ಕಿಚ್ಚು ಪಡುತ್ತಾನೆ ಎಂದಿದ್ದ, ಪೂರ್ವಿಗೆ ಆಗ ಆಕಾಶ ಮೂರೇ ಗೇಣು.

ಪೂರ್ವಿ, ಕಲ್ಯಾಣಿ, ಕಿಶೋರ್ ಅವರಿಗೆ ಅರಿವಿಲ್ಲದಂತೆ ಅವರ ಮನಗಳು ಒಂದಾಗಿದ್ದವು, weekend ಬಂದರೆ ಸಾಕು ಒಬ್ಬರನೊಬ್ಬರು ಬಿಟ್ಟಿರುತ್ತರಿಲಿಲ್ಲ. ಕಿಶೋರನ ಹಾಸ್ಯ ಪ್ರಜ್ಞೆಗೆ , ಅವನ caring ಮನೋಭಾವಕ್ಕೆ ಪೂರ್ವಿ ಶರಣಾಗಿದ್ದಳು.


(ಇನ್ನೂ ಇದೆ)